pm yasasvi scholarship 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರದ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಅರ್ಜಿ (pm yasasvi scholarship 2024) ಪ್ರಾರಂಭವಾಗಿದ್ದು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಸುಮಾರು 20 ಸಾವಿರ ಸಿಗುತ್ತೆ. ಹಾಗಾಗಿ ಈ ಒಂದು ಲೇಖನಿಯಲ್ಲಿ ಈ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನೆಯನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಹೌದು ಸ್ನೇಹಿತರೆ ಕೇಂದ್ರ ಸರಕಾರವು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಗೂ ಒಬಿಸಿ ವಿದ್ಯಾರ್ಥಿಗಳು ಮತ್ತು ಬುಡಕಟ್ಟು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣ ಮುಂದುವರಿಸಲು ಹಾಗೂ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಯ ಮೂಲಕ ಆರ್ಥಿಕ ನೆರವು ನೀಡಲಾಗುತ್ತದೆ ಹಾಗಾಗಿ ಕೇಂದ್ರ ಸರ್ಕಾರದ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆ ಅರ್ಜಿ ಪ್ರಾರಂಭವಾಗಿದ್ದು ಈ ಒಂದು ವಿದ್ಯಾರ್ಥಿ ವೇತನಕ್ಕೆ ಮೆಟ್ರಿಕ್ ಪೂರ್ವ ವರ್ಗದ ವಿದ್ಯಾರ್ಥಿಗಳು ಹಾಗೂ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪದವಿ ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು (pm yasasvi scholarship 2024)
ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆ, ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಒಂದು ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಸುಮಾರು 20 ಸಾವಿರ ವರೆಗಿನ ಶೈಕ್ಷಣಿಕ ಆರ್ಥಿಕ ನೆರವು ನೀಡಲಾಗುತ್ತದೆ ಆದ್ದರಿಂದ ಆಸಕ್ತಿ ಉಳ್ಳಂತ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರವು ವಿವಿಧ ವಿದ್ಯಾರ್ಥಿ ವೇತನಗಳನ್ನು ಜಾರಿಗೆ ತರುತ್ತಾರೆ. ಹಾಗಾಗಿ ಪ್ರತಿದಿನ ಈ ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹಾಗೂ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಎಂಬ ಮಾಹಿತಿಯನ್ನು ಪಡೆಯಬೇಕೇ ಹಾಗೂ ಖಾಸಗಿ ಕಂಪನಿಗಳು ಕೂಡ ವಿದ್ಯಾರ್ಥಿಗಳಿಗೆ ಹೊಸ ಹೊಸ ಸ್ಕಾಲರ್ಶಿಪ್ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ನಾವು ಪ್ರತಿದಿನ ನಮ್ಮ Karnataka Newz.in ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ
ಇಷ್ಟೇ ಅಲ್ಲದೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಈ ಸರಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸರಕಾರಿ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಹತೆ ಹಾಗೂ ಮಾನದಂಡಗಳು ಇತರ ಅನೇಕ ವಿವರಗಳನ್ನು ನಾವು ಪ್ರತಿದಿನ ಒಂದೊಂದು ಲೇಖನ ಮೂಲಕ ಪ್ರಕಟಣೆ ಮಾಡುತ್ತೇವೆ ಇದರ ಜೊತೆಗೆ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿ ಇರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಅಪ್ಡೇಟ್ ನೀಡುತ್ತೇವೆ ಎಲ್ಲಾ ಸುದ್ದಿಗಳನ್ನು ನೀವು ತಕ್ಷಣ ಮತ್ತು ಪ್ರತಿದಿನ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು
ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ (pm yasasvi scholarship 2024)..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದು ಈ ಒಂದು ವಿದ್ಯಾರ್ಥಿ ವೇತನದ ಮೂಲಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಶೈಕ್ಷಣಿಕ ಬೆಂಬಲ ನೀಡುವ ಕಾರ್ಯಕ್ರಮದ ಅಡಿಯಲ್ಲಿ ಇದರ ಮೂಲಕ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕಗಳು ಹಾಗೂ ಪುಸ್ತಕ ಖರೀದಿಗಳು ಮತ್ತು ಇತರ ಶೈಕ್ಷಣಿಕ ವೆಚ್ಚವನ್ನು ಬರಿಸಲು ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಒಂದು ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತರಲಾಗಿದೆ
ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆಯ ಮೂಲಕ 9ನೇ ತರಗತಿಯಿಂದ ವೃತ್ತಿಪರ ಕೋರ್ಸ್ ಗಳವರೆಗೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಲಾಭ ಪಡೆದುಕೊಳ್ಳಬೇಕು ಎಂಬ ಆಶಯ ನಮ್ಮದು ಆದ್ದರಿಂದ ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದು (pm yasasvi scholarship 2024) ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗೂ ಕೆಲವು ವರ್ಗಕ್ಕೆ ಸೇರಿದ ಜನರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು (pm yasasvi scholarship 2024)
ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನದ ವಿವರಗಳು (pm yasasvi scholarship 2024)..?
ವಿದ್ಯಾರ್ಥಿ ವೇತನದ ಹೆಸರು:- ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನ
ಪ್ರಾಧಿಕಾರದ ಹೆಸರು:- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸರ್ಕಾರದ ಹೆಸರು:- ಕೇಂದ್ರ ಸರ್ಕಾರ
ವಿದ್ಯಾರ್ಥಿ ವೇತನದ ಮೊತ್ತ:- ₹4,000 ರಿಂದ ₹20,000 ರೂಪಾಯಿವರೆಗೆ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:-
1) ಉನ್ನತ ದರ್ಜೆಯ ಶಾಲೆಗಳಿಗೆ:- 15/10/2024
2) ಉನ್ನತ ದರ್ಜೆಯ ಕಾಲೇಜುಗಳು:- 31/10/2024
ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಅಧಿಕೃತ ವೆಬ್ಸೈಟ್:- https://scholarships.gov.in/
ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು (pm yasasvi scholarship 2024)..?
ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಆ ವರ್ಗಗಳು ಯಾವಂದರೆ OBC,EBC, SNTDT, NT, & DNT ವರ್ಗದ ವಿದ್ಯಾರ್ಥಿಗಳು ಹಾಗೂ ಬುಡಕಟ್ಟು ವರ್ಗದ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಹಾಗಾಗಿ ನೀವೇನಾದರೂ ಈ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ (pm yasasvi scholarship 2024)
ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ (pm yasasvi scholarship 2024)..?
ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಾವು ವಿದ್ಯಾಭ್ಯಾಸ ಮಾಡುವ ತರಗತಿಯ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನಿಗದಿ ಮಾಡಲಾಗಿದ್ದು ಅವುಗಳ ವಿವರವನ್ನು ಕೆಳಗಡೆ ನೀಡಲಾಗಿದೆ
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ:- ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳು ಅಂದರೆ ಒಂಬತ್ತನೇ ತರಗತಿ ಹಾಗೂ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ವರ್ಷಕ್ಕೆ ಈ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನದ ಅಡಿಯಲ್ಲಿ ₹4,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ (pm yasasvi scholarship 2024)
11 & 12ನೇ ತರಗತಿ ವಿದ್ಯಾರ್ಥಿಗಳಿಗೆ:– ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಸುಮಾರು 5000 ವಾರ್ಷಿಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬರೋಬ್ಬರಿ 20,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಹಾಗಾಗಿ ಈ ಒಂದು ವಿದ್ಯಾರ್ಥಿ ವೇತನದ ಲಾಭವನ್ನು ಪ್ರತಿ ಒಬ್ಬರು ಪಡೆದುಕೊಳ್ಳಬಹುದು
ವೃತ್ತಿಪರ ಕೋರ್ಸ್ ಗಳು:- ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವೃತ್ತಿಪರ ಕೋರ್ಸ್ ಗಳು ಅಂದರೆ ಐಟಿಐ, ಡಿಪ್ಲೋಮೋ ಇಂಜಿನಿಯರಿಂಗ್ ಮುಂತಾದ ಕೋರ್ಸ್ಗಳು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 13 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ
ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (pm yasasvi scholarship 2024)..?
ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ಅರ್ಹತೆಯ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
- ಸ್ನೇಹಿತರೆ ಈ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ OBC, EBC, SNTDT, NT, ಮತ್ತು DNT ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗೂ ಬುಡಕಟ್ಟು ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿ ಒಳಗಡೆ ಇರಬೇಕಾಗುತ್ತದೆ
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
- ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಹಾಗೂ ವಿದ್ಯಾರ್ಥಿಯ ಅಧ್ಯಯನ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು UDISE/AISHE ಎಲ್ಲಿ ಕೋಡ್ ಹೊಂದಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (pm yasasvi scholarship 2024)..?
ಸ್ನೇಹಿತರ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕೆಲವೊಂದು ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
ಅಂಕಪಟ್ಟಿಗಳ ವಿವರ:– ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿ ಅಂದರೆ 9 ರಿಂದ ಹತ್ತನೇ ತರಗತಿ ಅಥವಾ 11 ರಿಂದ 12ನೇ ತರಗತಿ ಅಥವಾ ಪದವಿ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಕ್ಸ್ ಕಾರ್ಡ್ ಗಳನ್ನು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೆಗೆದುಕೊಂಡು ಹೋಗಬೇಕು ಅಥವಾ ಅಪ್ಲೋಡ್ ಮಾಡಬೇಕಾಗುತ್ತದೆ
ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಆದಾಯ ಮಿತಿ ನೀಡಲಾಗಿದ್ದು ಹಾಗಾಗಿ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಪೋಷಕರ ಆದಾಯ ಪ್ರಮಾಣ ಪತ್ರ ಅಥವಾ ವಿದ್ಯಾರ್ಥಿಯ ಆದಾಯ ಪ್ರಮಾಣ ಪತ್ರ ನೀಡಬೇಕಾಗುತ್ತದೆ ಏಕೆಂದರೆ ಈ ಒಂದು ಆದಾಯ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಯ ಪೋಷಕರ ಆದಾಯ ಮಿತಿ ನಿಖರವಾಗಿ ಗೊತ್ತಾಗುತ್ತದೆ
ಜಾತಿ ಪ್ರಮಾಣ ಪತ್ರ:- ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಏಕೆಂದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು ಹಾಗಾಗಿ ತಮಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯ
ಪಾಸ್ಪೋರ್ಟ್ ಗಾತ್ರದ ಫೋಟೋಗಳು:- ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಎರಡು ಫೋಟೋಗಳನ್ನು ನೀಡಬೇಕಾಗುತ್ತದೆ
ಬ್ಯಾಂಕ್ ಪಾಸ್ ಬುಕ್ ವಿವರ:- ಸ್ನೇಹಿತರ ಪಿಎಂ ಯಶಸ್ವಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ವಿವರ ನೀಡಬೇಕು ಏಕೆಂದರೆ ಈ ಒಂದು ವಿದ್ಯಾರ್ಥಿ ವೇತನದ ಹಣವು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವರಗಳು:- ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ತಮಗೆ ಸಂಬಂಧಿಸಿದ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಇತ್ತೀಚಿನ ಭಾವಚಿತ್ರ, ರೇಷನ್ ಕಾರ್ಡ್, ಟಿಸಿ, ಮುಂತಾದ ಪ್ರಮಾಣ ಪತ್ರಗಳನ್ನು ನೀಡಬೇಕಾಗುತ್ತದೆ
ಸ್ನೇಹಿತರೆ ಈ ಮೇಲೆ ನೀಡಿದ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು 20,000 ವರೆಗೆ ಈ ಒಂದು ವಿದ್ಯಾರ್ಥಿ ವೇತನದ ಮೂಲಕ ಹಣ ಸಹಾಯ ಪಡೆಯಬಹುದು
ಅರ್ಜಿ ಸಲ್ಲಿಸುವುದು ಹೇಗೆ (pm yasasvi scholarship 2024)..?
ಸ್ನೇಹಿತರೆ ನೀವು ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಮೊದಲು ನೀವು ಪಿಎಂ ಯಶಸ್ವಿನಿ ವಿದ್ಯಾರ್ಥಿವೇತನದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದಕ್ಕೆ ಸಂಬಂಧಿಸಿದ ಲಿಂಕನ್ನು ನಾವು ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತಿದೆ ನಂತರ ಅಲ್ಲಿ ನಿಮ್ಮ ಹೆಸರು ಹಾಗೂ ಇತರ ದಾಖಲಾತಿಗಳ ವಿವರವನ್ನು ನಮೂದಿಸಿ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಒಂದು ವೇಳೆ ನಿಮಗೆ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬರದೇ ಹೋದಲ್ಲಿ ನೀವು ನಿಮ್ಮ ಹತ್ತಿರದ ಯಾವುದಾದರೂ ಒಂದು ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನಾವು ಮೇಲೆ ಕೊಟ್ಟಿರುವಂತಹ ಎಲ್ಲಾ ದಾಖಲಾತಿಗಳ ವಿವರವನ್ನು ತೆಗೆದುಕೊಂಡು ಭೇಟಿ ನೀಡಿ ನಂತರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
ಸ್ನೇಹಿತರೆ ನಿಮಗೆ ಈ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನದ ಮಾಹಿತಿ ಇಷ್ಟವಾದರೆ ಆದಷ್ಟು ಓಬಿಸಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಈ ಒಂದು ಲೇಖನಿಯನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಅಪ್ಡೇಟ್ ಪಡೆಯಬೇಕೆ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕೆ..? ಹಾಗಾಗಿ ನಮ್ಮ ಕರ್ನಾಟಕದಲ್ಲಿ ನಡೆಯುವಂತ ಪ್ರಮುಖ ಸುದ್ದಿಗಳು ಹಾಗೂ ಇತರ ಎಲ್ಲಾ ಮಾಹಿತಿಗಳನ್ನು ತಕ್ಷಣ ಹಾಗೂ ಪ್ರತಿದಿನ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು